World Bicycle Day 2021 : ಕೊರೋನಾ ನಡುವೆ ಸೈಕ್ಲಿಂಗ್! ನಿಮ್ಮ ಆರೋಗ್ಯಕ್ಕೆ ಹೇಗೆ ಪ್ರಯೋಜನಕಾ ಗೊತ್ತಾ?
ಲಾಕ್ ಡೌನ್ ಗಳಿಂದ ಜನರ ದೈನಂದಿನ ಚಟುವಟಿಕೆ ತುಂಬಾ ಕಡಿಮೆ ಆಗಿದೆ. ಅದು ಕೂಡ ಅಷ್ಟೋ ಇಷ್ಟೋ ಅಲ್ಲ, ಶೇಕಡಾ 40ರಷ್ಟು ಕಡಿಮೆ ಸಕ್ರಿಯರನ್ನಾಗಿಸಿವೆಯಂತೆ.
ನವದೆಹಲಿ : ಜರ್ಮನ್ ವಿಜ್ಞಾನಿಗಳು ನಡೆಸಿದ ಅಧ್ಯಯನದ ಪ್ರಕಾರ, ಕೊರೋನಾ, ಲಾಕ್ ಡೌನ್ ಗಳಿಂದ ಜನರ ದೈನಂದಿನ ಚಟುವಟಿಕೆ ತುಂಬಾ ಕಡಿಮೆ ಆಗಿದೆ. ಅದು ಕೂಡ ಅಷ್ಟೋ ಇಷ್ಟೋ ಅಲ್ಲ, ಶೇಕಡಾ 40ರಷ್ಟು ಕಡಿಮೆ ಸಕ್ರಿಯರನ್ನಾಗಿಸಿವೆಯಂತೆ. ಇನ್ನು ದೈಹಿಕ ಚಟುವಟಿಕೆಗಳ ಮಟ್ಟ ಮತ್ತು ಯೋಗಕ್ಷೇಮದ ಗಮನಾರ್ಹ ಇಳಿಕೆ 'ಸಾಂಕ್ರಾಮಿಕದೊಳಗೆ ಸಾಂಕ್ರಾಮಿಕ'ವನ್ನ ಉತ್ತೇಜಿಸಬಹುದು ಎಂದು 14 ದೇಶಗಳ 20 ವಿಜ್ಞಾನಿಗಳು ಎಚ್ಚರಿಸಿದ್ದಾರೆ.
ಈ ಪರಿಸ್ಥಿತಿ ಮಾನಸಿಕ ಸಮಸ್ಯೆಗಳು, ಕೀಲು ನೋವುಗಳು, ಬೊಜ್ಜು ಮುಂತಾದ ಇತರ ಹಲವಾರು ಆರೋಗ್ಯ ಸಮಸ್ಯೆ(Health Problems)ಗಳನ್ನ ತಂದೊಡ್ಡುತ್ತಿದೆ. ಆದ್ದರಿಂದ, ನಾವು ನಿಮಗೆ ದೈಹಿಕ ಚಟುವಟಿಕೆಯನ್ನ ತೆಗೆದುಕೊಳ್ಳಲು ಶಿಫಾರಸು ಮಾಡುತ್ತೇವೆ. ಅಂದ್ಹಾಗೆ, ಸೈಕ್ಲಿಂಗ್ ಕೇವಲ ಮೋಜಿನ ಸಂಗತಿಯಲ್ಲ. ಇದು ಬಹಳಷ್ಟು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತೆ. ವಿಶ್ವ ಬೈಸಿಕಲ್ ದಿನ, ನೀವು ನಿಮ್ಮ ಮನೆ ಬಾಗಿಲಿನ ಹೊರಗೆ ಫಿಟ್ನೆಸ್ ಆಟವನ್ನ ಪ್ರಾರಂಭಿಸೋದು ಉತ್ತಮ.
ಇದನ್ನೂ ಓದಿ : How To Make Coriander Tea: ನಿತ್ಯ ಎದ್ದ ಕೂಡಲೇ ಕುಡಿಯಿರಿ ಒಂದು ಕಪ್ ಕೊತ್ತಂಬರಿ ಚಹಾ
ಕೋವಿಡ್-19 ನಡುವೆ ಸೈಕ್ಲಿಂಗ್ ಪ್ರಯೋಜನಗಳು!
ಬೈಸಿಕಲ್ ಸವಾರಿಯು ಆರೋಗ್ಯಕ್ಕೆ ತುಂಬಾ ಪ್ರಯೋಜನವಾಗಿದೆ. ಈಗ ದೀರ್ಘಕಾಲದಿಂದ ತಮ್ಮ ಮನೆಯೊಳಗೆ ಲಾಕ್ ಡೌನ್(Lockdown) ಆಗಿರುವವರಿಗೆ ಇದು ಹೆಚ್ಚು ಅಗತ್ಯವಾಗಿದೆ. ಸೈಕ್ಲಿಂಗ್ʼನ ಪ್ರಯೋಜನಗಳು ಈ ಕೆಳಗಿನಂತಿವೆ.
ಇದನ್ನೂ ಓದಿ : ನೀವು ಬಳಸುವ ತುಪ್ಪ ನಕಲಿ ಇರಬಹುದಾ..? ಫಟಾಫಟ್ ಚೆಕ್ ಮಾಡಿ..!
ನಿಮ್ಮ ಮೂಳೆಗಳನ್ನ ಬಲಪಡಿಸುತ್ತೆದೆ!
ಸೈಕ್ಲಿಂಗ್(Cycling) ಒಂದು ಅತ್ಯುತ್ತಮ ವ್ಯಾಯಾಮವಾಗಿದೆ. ಲಾಕ್‌ಡೌನ್‌ನಿಂದಾಗಿ ಬಹಳಷ್ಟು ಜನರಲ್ಲಿ ಸ್ನಾಯು ನೋವು, ಕೀಲು ನೋವು ಮತ್ತು ಇತರ ಸಮಸ್ಯೆಗಳನ್ನ ಅನುಭವಿಸುತ್ತಿದ್ದಾರೆ. ಸೈಕ್ಲಿಂಗ್ ಮೂಲಕ ಇವುಗಳನ್ನ ಗುಣಪಡಿಸಬಹುದು.
ಇದನ್ನೂ ಓದಿ : ಎಚ್ಚರ..! ಆರೋಗ್ಯಕ್ಕಾಗಿ ಮಾಡುವ ಈ ಐದು ತಪ್ಪು ಆರೋಗ್ಯ ಕೆಡಿಸಬಹುದು..!
ನಿಮ್ಮ ದೈಹಕ ಶಕ್ತಿ ಹೆಚ್ಚಿಸುತ್ತದೆ!
ಲಾಕ್ ಡೌನ್ ಸಮಯದಲ್ಲಿ ಜನರು ತಮ್ಮ ಮನೆ(Home)ಯಲ್ಲಿ ಮಾಡುತ್ತಿಲ್ಲ. ಇದು ಅವರ ಶಕ್ತಿ ಮತ್ತು ಸಾಮರ್ಥ್ಯದ ಮೇಲೆ ನೇರವಾಗಿ ಪರಿಣಾಮ ಬೀರ್ತಿದೆ. ಆದ್ದರಿಂದ ಈ ಸಂದರ್ಭದಲ್ಲಿ, ಸೈಕ್ಲಿಂಗ್ ಅದ್ಭುತಗಳನ್ನ ಮಾಡಬಹುದು. ಯಾಕಂದ್ರೆ, ಇದು ನಿಮ್ಮ ದೇಹದ ಶಕ್ತಿ ಮತ್ತು ಸಾಮರ್ಥ್ಯವನ್ನ ಹೆಚ್ಚಿಸಲು ಸಹಾಯ ಮಾಡುತ್ತದೆ. ಈ ವ್ಯಾಯಾಮದಿಂದ ರಕ್ತ ಪರಿಚಲನೆಯೂ ಉತ್ತಮಗೊಳ್ಳುತ್ತೆ.
ಇದನ್ನೂ ಓದಿ : ಕೂದಲ ಆರೋಗ್ಯಕ್ಕೆ ತೆಂಗಿನ ಎಣ್ಣೆ ಯಾಕೆ ಬೆಸ್ಟ್..? ಇಲ್ಲಿದೆ 7 ಕಾರಣ
ಹೃದಯ ರಕ್ತನಾಳದ ಫಿಟ್ನೆಸ್ ಸುಧಾರಿಸುತ್ತೆ!
ಕೋವಿಡ್-19(Covid-19) ರಿಂದ ಬಳಲುತ್ತಿರುವ ಜನರನ್ನ ಪರಿಗಣಿಸಿದ್ರೆ ದೈಹಿಕ ಆರೋಗ್ಯವು ಈಗ ಇರುವ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ. ಆರೈಕೆ ಅಗತ್ಯವಿರುವ ದೇಹದ ಮುಖ್ಯ ಅಂಗಗಳಲ್ಲಿ ಒಂದು ಹೃದಯ. ಸೈಕ್ಲಿಂಗ್ ಮಾಡುವುದ್ರಿಂದ ನಿಮ್ಮ ಹೃದಯ ರಕ್ತನಾಳದ ಆರೋಗ್ಯವನ್ನ ಪರಿಣಾಮಕಾರಿ ಬಲಪಡಿಸಬಹುದು. ಯಾಕಂದ್ರೆ, ಇದು ಕಾರ್ಡಿಯೋದ ಒಂದು ರೂಪವಾಗಿದೆ.
ಇದನ್ನೂ ಓದಿ : Empty Stomach : ಖಾಲಿ ಹೊಟ್ಟೆಯಲ್ಲಿ ಎಂದಿಗೂ ಈ ಆಹಾರ ಸೇವಿಸಬೇಡಿ! ಇಲ್ಲದಿದ್ರೆ ತಪ್ಪಿದಲ್ಲ ಈ ತೊಂದರೆ!
ಏಕಾಗ್ರತೆಗೆ ಒಳ್ಳೆಯದು ಸೈಕ್ಲಿಂಗ್!
ದುರದೃಷ್ಟವಶಾತ್, ಲಾಕ್ ಡೌನ್ ಬಹಳಷ್ಟು ಜನರಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳ ಹೆಚ್ಚಳಕ್ಕೆ ಕಾರಣವಾಗಿದೆ. ಅನೇಕರು ಆತಂಕ, ಖಿನ್ನತೆ(Depression), ಒತ್ತಡ ಮತ್ತು ಹೆಚ್ಚಿನ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ದೂರುತ್ತಿದ್ದಾರೆ. ಇನ್ನು ಅನೇಕರು ತಮ್ಮ ಕೆಲಸ ಮತ್ತು ಅಧ್ಯಯನದ ಮೇಲೆ ಗಮನ ಹರಿಸಲು ಸಹ ವಿಫಲರಾಗಿದ್ದಾರೆ. ಆದ್ದರಿಂದ, ಸೈಕ್ಲಿಂಗ್ ಅಂತಹವರಿಗೆ ಉತ್ತಮ ಆಯ್ಕೆಯಾಗಿದೆ. ಯಾಕಂದ್ರೆ, ಇದು ಸಮತೋಲನವನ್ನ ಕಲಿಸುತ್ತೆ. ಇದು ನಿಮ್ಮ ಏಕಾಗ್ರತೆಯ ಶಕ್ತಿಯನ್ನ ಸುಧಾರಿಸುತ್ತದೆ ಮತ್ತು ನಿಮ್ಮ ಮನಸ್ಥಿತಿಯನ್ನ ಉತ್ತಮಗೊಳಿಸುತ್ತೆ.
ಇದನ್ನೂ ಓದಿ : World Milk Day 2021: ಇವುಗಳನ್ನು ಹಾಲಿನಲ್ಲಿ ಮಿಕ್ಸ್ ಮಾಡಿ ಕುಡಿದರೆ ಉತ್ತಮ ಆರೋಗ್ಯ ನಿಮ್ಮದಾಗಲಿದೆ
ಸುಲಭ ಮತ್ತು ವಿನೋದಕ್ಕೆ ಸೈಕ್ಲಿಂಗ್!
ಮೇಲಿನ ಎಲ್ಲಾ ಆರೋಗ್ಯ(Health) ಕಾರಣಗಳನ್ನು ಹೊರತುಪಡಿಸಿ, ಸೈಕ್ಲಿಂಗ್ ಸಹ ಸುಲಭ ಮತ್ತು ಮೋಜಿನ ಚಟುವಟಿಕೆಯಾಗಬಹುದು. ಯಾಕಂದ್ರೆ, ಕೋವಿಡ್-19 ಲಾಕ್ ಡೌನ್ ನಡುವೆ ಹೆಚ್ಚಿನ ಜನರು ತಮ್ಮ ಮನೆಗಳಿಂದ ಹೊರಬಂದು ಬಹಳ ಸಮಯವಾಗಿದೆ. ಹಾಗಾಗಿ ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಮನೆಯ ಮುಂದಿರುವ ಖಾಲಿ ಜಾಗದಲ್ಲಿ ಸೈಕಲ್ ಸವಾರಿ ಮಾಡಬಹುದು. ಈ ಮೂಲಕ ಅವರ ಮಾನಸಿಕ ಒತ್ತಡವನ್ನ ಕಡಿಮೆ ಮಾಡಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ